ಕೋವಿಡ್ ಸಮಯದಲ್ಲಿ ಮೆಟ್ರೊ ಪ್ರಯಾಣ
ಕೋವಿಡ್ ಯುಗ ಶುರುವಾಗುವ ಮೊದಲು ಬೆಂಗಳೂರು ಮೆಟ್ರೊನಲ್ಲಿ ಪ್ರಯಾಣ ಮಾಡುವುದು ಒಂದು ಸಾಧಾರಣ ವಿಷಯವಾಗಿತ್ತು. ಆದರೆ ಈಗ ಕೋವಿಡ್ ಸಮಸ್ಯೆ ಶುರುವಾದಾಗಿನಿಂದ ಅಕ್ಟೋಬರ್ ವರೆಗೂ ಮೆಟ್ರೊ ಪ್ರಯಾಣವನ್ನು ಸ್ತಭ್ಧಗೊಳಿಸಲಾಗಿತ್ತು. ಮೆಟ್ರೊ ಪುನಃ ಆರಂಭವಾದಾಗಿನಿಂದ ಜನರ ಮನಸಿನಿಂದ ಇನ್ನೂ ಭಯ ದೂರವಾದಂಗಿಲ್ಲ.
ಕೋವಿಡ್ ನಿಂದ ಎಚ್ಚರವಾಗಿರುವುದು ಅತ್ಯಗತ್ಯ. ಮಾಸ್ಕ್ ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರ ಅತ್ಯಗತ್ಯ ಆದರೆ ಭಯ ಪಡುವ ಅಗತ್ಯವಿಲ್ಲ.
ಎನೇ ಆಗಲಿ ಈ ಕೋವಿಡ್ ಯುಗದಲ್ಲಿ ಮೆಟ್ರೊ ಪ್ರಯಾಣ ಮಾಡುವುದು ಒಂದು ಸಾಹಸವೇ ಸರಿ.
ನನ್ನ ಮೆಟ್ರೊ ಪ್ರಯಾಣದ ಅನುಭವ ವನ್ನು ಈ ವಿಡಿಯೋದಲ್ಲಿ ನೀವು ನೋಡಬಹುದು.
ಮೆಟ್ರೊ ಸ್ಟೇಷನ್ ನಲ್ಲಿ ಟೋಕನ್ ವಿತರಣೆಯನ್ನು ರದ್ದುಗೊಳಿಸಲಾಗಿದೆ. ಕೇವಲ ಮೆಟ್ರೊ ಸ್ಮಾರ್ಟ್ ಕಾರ್ಡ್ ಗಳನ್ನು ಉಪಯೋಗಿಸುವ ಅನುಮತಿ ನೀಡಲಾಗಿದೆ.
ಮೆಟ್ರೊ ಕ್ಯಾಬಿನ್ ಒಳಗೆ ತಾಪಮಾನವನ್ನು ೨೭ ಡಿಗ್ರೀ ಯನ್ನು ಕಾದಿರಿಸಲಾಗಿದೆ.
ಕ್ಯಾಬಿನ್ ಒಳಗೆ ಕೇವಲ ೨೦೦ ಜನರು ಮಾತ್ರ ಪ್ರಯಾಣ ಮಾಡಲು ಅವಕಾಶವಿರುತ್ತದೆ.
No comments:
Post a Comment