Madhukar Planet: Be Organic - ಎಲ್ಲರೂ ಮಾಡಬೇಕಾದ ಮೊದಲ ಕೆಲಸಗಳ ಪಟ್ಟಿ

Thursday, December 1, 2022

Be Organic - ಎಲ್ಲರೂ ಮಾಡಬೇಕಾದ ಮೊದಲ ಕೆಲಸಗಳ ಪಟ್ಟಿ

*1)* ಟೂತ್‌ಪೇಸ್ಟ್ ಬದಲಾವಣೆ ಮಾಡಿ

*2)* ಕಾಫಿ/ಟೀ ಇಂದ ಕಷಾಯಕ್ಕೆ ಬನ್ನಿ

*3)* ಮಾನವ ನಿರ್ಮಿತ ಪ್ರಾಣಿ (ಹಂದಿ ಹಾಲು) ಹಾಲನ್ನು ಬದಲಾವಣೆ ಮಾಡಿ. ದೇಶೀ ಆಕಳ ಹಾಲು ಅಥವಾ ತೆಂಗಿನಕಾಯಿ ಹಾಲು ಬಳಸಿ.

*4)* ಸಕ್ಕರೆಯಿಂದ ಶುದ್ಧ ಬೆಲ್ಲಕ್ಕೆ ಬನ್ನಿ

*5)* ನೀರನ್ನು ಬದಲಾವಣೆ ಮಾಡಿ.

(ತಾಮ್ರದ ಹಂಡೆಗೆ ನೀರು ಹಾಕಿ ಅದಕ್ಕೆ ನೀರಿನ ಚಕ್ಕೆ ಪುಡಿ ಮತ್ತು ಜೀರಿಗೆ ಹಾಕುವುದು)

*6)* ಬಿಳಿ ಉಪ್ಪಿನಿಂದ ಸಹಜ ಉಪ್ಪಿಗೆ ಬನ್ನಿ.

*7)* ರೀಫ಼ೈನ್ಡ್ ಎಣ್ಣೆ ಯಿಂದ ನಿಜವಾದ ಗಾಣದ ಎಣ್ಣೆಗೆ ಬನ್ನಿ.

*8)* ಅಡುಗೆ ಮನೆಯಲ್ಲಿ ಇರುವ ಪ್ಲಾಸ್ಟಿಕ್ ತೆಗೆದು ಸ್ಟೀಲ್ ಅಥವಾ ಗಾಜಿನ ಬಾಟಲ್ ಗೆ ಬದಲಾವಣೆ ಮಾಡಿ.

*9)* ಅಲ್ಯೂಮಿನಿಯಂ ಪಾತ್ರೆ ಮತ್ತು ಕುಕ್ಕರ್ ಅನ್ನು ಮನೆಯಿಂದ ಹೊರಹಾಕಿ ಮಣ್ಣಿನ ಮಡಕೆಗಳ ಉಪಯೋಗ ಮಾಡಿ.

*10)* ನಾನ್ ಸ್ಟಿಕ್ ಪಾತ್ರೆ ಮತ್ತು ಇತರೆ ನಾನ್ ಸ್ಟಿಕ್ ವಸ್ತುಗಳಿಂದ ಕಬ್ಬಿಣದ ಬಾಣಲಿ, ರೊಟ್ಟಿ ಹಂಚು, ದೋಸೆ ಹಂಚು ಮತ್ತು ಪಡ್ಡಿನ ಹಂಚಿಗೆ ಬನ್ನಿ.

*11)* ಫ಼್ರಿಜ್ ಮತ್ತು ಮೈಕ್ರೋ ಓವನ್ ಉಪಯೋಗ ನಿಲ್ಲಿಸಿ.

(ಮಣ್ಣಿನ ಮಡಕೆಯಲ್ಲಿ ಸೊಪ್ಪು ತರಕಾರಿ ಇಡಿ)

*12)* ಮನೆಯಲ್ಲಿಯೇ ರಾಸಾಯನಿಕ ಮುಕ್ತ ಸೊಪ್ಪು, ತರಕಾರಿ, ಹಣ್ಣು ಮಾಡಿಕೊಂಡು ಸೇವಿಸಿ. (ಹುಣಸೆ ಹಣ್ಣಿನ ನೀರಿನಲ್ಲಿ ನೆನೆಸುವುದು)

*13)* ಅಡುಗೆ ಮಾಡುವಾಗ ಇಂಗು, ಅರಿಶಿನ ಮತ್ತು ಬೆಲ್ಲ ಉಪಯೋಗ ಮಾಡಿ.

*14)* ಕಡ್ಡಾಯವಾಗಿ ಕಷಾಯವನ್ನು ಮಣ್ಣಿನ ಮಡಕೆಯಲ್ಲಿ ಮಾಡಿ ಮನೆ ಮಂದಿ ಎಲ್ಲರೂ ಸೇವಿಸಿ.

*15)* ಮನೆ ಮಂದಿ ಎಲ್ಲರೂ ಒಟ್ಟಿಗೆ ಕೆಳಗೆ ಕುಳಿತು ಊಟ, ಉಪಹಾರ ಮಾಡಿ.

*16)* ಉಟದ ನಂತರ ಎಲ್ಲರೂ ತಾಂಬೂಲ ಸೇವಿಸಿ.

*17)* ಪಾತ್ರೆಗಳನ್ನು ತೊಳೆಯಲು ಕಡಲೆ ಹಿಟ್ಟು ಮತ್ತು ಸೀಗೇಕಾಯಿ ಪುಡಿ ಬಳಸಿ.

*18)* ಸ್ನಾನಕ್ಕೆ ಸೋಪಿನ ಬದಲು ಸ್ನಾನದ ಚೂರ್ಣ ಬಳಸಿ ಸ್ನಾನದ ನಂತರ  ಸ್ವಲ್ಪ ಶುದ್ಧ ಕೊಬ್ಬರಿ ಎಣ್ಣೆ ಮೈಗೆ ಹಚ್ಚಿ ಚೆನ್ನಾಗಿ ತಿಕ್ಕಿ ಬಟ್ಟೆಯನ್ನು ಧರಿಸಿ.

*19)* ಪ್ರತಿ ದಿನವೂ ಯೋಗಾಸನ ಮತ್ತು ಪ್ರಾಣಾಯಾಮ ಮಾಡಿ.

*20)* ದಿನಕ್ಕೊಮ್ಮೆ ಒಂದು ಗಂಟೆ ವಾಕಿಂಗ್ ಮಾಡಿ.

*21)* ಆಗಾಗ, ಬಳಸಬಾರದು ಮತ್ತು ಬಳಸಬೇಕು ಎಂದು ಬರೆದುಕೊಂಡ ನೋಟ್ಸ್ ಗಮನಿಸಿ.

*22)* ನಾನ್ ವೆಜ್ ತಿನ್ನಬೇಡಿ.

*23)* ಪ್ಲಾಸ್ಟಿಕ್ ನೀರಿನ ಬಾಟಲ್ ಮತ್ತು ಊಟದ ಡಬ್ಬಿ ಯಿಂದ ಸ್ಟೀಲ್ ಬಾಟಲ್ ಮತ್ತು ಸ್ಟೀಲ್ ಟಿಫಿನ್ ಬಾಕ್ಸ್ ಗೆ ಬನ್ನಿ.

*24)* ಬೆಳಗ್ಗೆ ಬಲಭಾಗದಲ್ಲಿ ಮಲಗಿ ಏಳುವುದು (ಶಿಶು ವಿಶ್ರಾಮಾಸನ) ರಾತ್ರಿ ಎಡಭಾಗದಲ್ಲಿ ಮಲಗುವುದನ್ನು ಮನೆ ಮಂದಿ ಎಲ್ಲರೂ ಅನುಸರಿಸಿ.

*25)* ಬೆಳಗ್ಗೆ ಎದ್ದೊಡನೆ ಉಷಃಪಾನ ಮಾಡಿ, ರಾತ್ರಿ ಮಲಗುವ ಮುನ್ನ  ಒಂದು ಕಪ್ ನೀರು ಕುಡಿದು 15 ರಿಂದ 20 

ನಿಮಿಷಗಳ ಕಾಲ ವಾಕಿಂಗ್ ಮಾಡಿ ನಂತರ ಮಲಗಿ.

*26)* ಹೆಚ್ಚಾಗಿ ಖಾದಿ 

ಬಟ್ಟೆಗಳನ್ನು ಬಳಸಿ ಆರೋಗ್ಯ ಪಡೆಯಿರಿ ಹಾಗೂ ಸ್ವದೇಶಿ ಚಿಂತನೆ ಬೆಳೆಸಿ.

*27)* ಅಗ್ನಿಹೋತ್ರ ಮಾಡುವುದನ್ನು ಮರೆಯಬಾರದು


1) *ಆಹಾರವೇ ಔಷಧಿಯಾಗಲಿ, ಅಡುಗೆ ಮನೆಯೇ ಔಷದಾಲಯವಾಗಲಿ,,,*

2) *ಕನಿಷ್ಠ 10ಜನರಿಗೆ ತಿಳಿಸಿ 10ಕುಟುಂಬದ ಬದಲಾವಣೆ ಮಾಡಲು ವಿನಂತಿ*

3) *ನಾವು ಬದಲಾಗೋಣ*👏


ಭಗವಂತ ನಮ್ಮೆಲ್ಲರಿಗೂ ತಾಳ್ಮೆ, ವಿವೇಕ, ಜ್ಞಾನ ಮತ್ತು ಭಕ್ತಿ ಕೊಟ್ಟು ಕಾಪಾಡಲಿ.

ಕ್ರುಪೆ - ವಾಟ್‌ಸ್ಯಾಪ್‌ forward galu 🙂

No comments: